{"product_id":"mandovi-by-ravi-belagere-kannada-edition-paperback","title":"Mandovi By Ravi Belagere (Kannada Edition) Paperback","description":"\u003cp\u003e\u003cspan\u003eಇಂದಿನ ಕಾಲದ ವರುಷಕ್ಕೆರಡರ, ಮನೆಗೊಂದು ಮಸಣಕ್ಕೊಂದು ಎಂದು ಜೀವ ತಾಳಿದ ಪ್ರೀತಿಯ ಕಥೆಯಲ್ಲವದು. ಬದುಕಿನ ಸರಿಗಮವನ್ನು ಹುದುಗಿಸಿ ಸಂಗೀತದ ಸ್ವರಾಲಾಪನೆಯಲ್ಲಿ ವರ್ಷಗಳು ಕಳೆದೋದರೂ ಮರೆಯದ ಒಂದು ಅವಿಸ್ಮರಣೀಯ ಅನುಭವ. ತಪಸ್ಸಿಗೆ ಭಂಗ ಬಂದಿತೇನೋ ಆದರೆ ಚಲಪತಿಯ ಆ ಸ್ವರ್ಗಮಯವಾದ ನಿಷ್ಕಾಮ ಪ್ರೀತಿಗೆ ಭಂಗವಿಲ್ಲ. ತನ್ನ ಪ್ರೀತಿಯ ಹಕ್ಕಿಯನ್ನು ಕಣ್ಣೆದುರಿಗೆ ಧಾರೆಯೆರೆದನಾದರೂ ಅದರಲ್ಲಿ ತನ್ನ ಪ್ರೇಮವನ್ನು ಧಾರೆಯೆರೆಯಲಿಲ್ಲ. ನಿತ್ಯ ಮಹೋತ್ಸವದಂತೆ ಕಾದು ಕೊಂಡು ಜೋಪಾನವಾಗಿ ಮನಸ್ಸಿನಾಳದಲ್ಲಿ ಹುದುಕಿಟ್ಟ ಪ್ರೀತಿಗೆ ಸಿಕ್ಕ ಸಮಯ ಮುಪ್ಪೆಂದಾಗ ಅದರ ಅರ್ಥ-ಮನ-ಕಾಮನೆಗಳನ್ನು ಬಿಟ್ಟು ಜಟ್ಟು ಹಿಡಿದ ಕೂತ ಚಲಪತಿಗೆ ಮಾಂಡೋವಿ  ದೊರೆತದ್ದು ಒಂದು ಮರೆಯಲಾಗದ ಅನುಭವಗಳ ಪ್ರೀತಿಯ ಖಂಡವೇ ಸರಿ. ಮನಸ್ಸುಗಳ ಮಿಡಿತ ಒಂದಾದಾಗ ಅಗುವ ಸುಖಕ್ಕಿಂತ ತನ್ನೆದುರುಗಿದ್ದ ದೇವತೆಯ ಜೊತೆ ಕೇವಲ ತನ್ನದೇ ಯೋಚನಾ ಲಹರಿಯಲ್ಲಿ ಒಂದು ವಾಸ್ತವವಲ್ಲದ ದೋಣಿಯನ್ನು ಇಳಿಬಿಟ್ಟಿದ್ದ. ಮನಸ್ಸಿಗೆ ವಯಸ್ಸಿಲ್ಲದಿರಬಹುದು ಆದರೆ ದೇಹವು ಕಾಲವನ್ನು ಒಂದು ಕ್ಷಣ ನಿಲ್ಲು ಎಂದು ಹೇಳಲು ಸಾದ್ಯವೇ? ಅಂತಹ ಮುಪ್ಪಿನಲ್ಲಿ ತನಕ ಮಾಂಡೋವಿ ಬರುವಳೆಂದು ಕಾದ ಚಲಪತಿಗೆ ಅವಳು ಬಂದು ತನ್ನೆದೆಯನ್ನು ಸೇರಿದ ಕ್ಷಣ ಅದೊಂದು ಸುಂದರಮಯ ಜಗದ ಮರು ಸೃಷ್ಟಿಯಾಗಿ ಕಂಡಿತೇನೋ! ಅಂತಹ ಚಲಪತಿಯ ಪ್ರೀತಿಗಾಗಿ ಪಣ ತೊಟ್ಟು ನಿಂತವನ\u003c\/span\u003e\u003c\/p\u003e","brand":"The Indian Book Store","offers":[{"title":"Default Title","offer_id":46155494228104,"sku":null,"price":499.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0590\/3830\/2344\/files\/210Mxfpoq_L.jpg?v=1783082153","url":"https:\/\/www.theindianbookstore.in\/products\/mandovi-by-ravi-belagere-kannada-edition-paperback","provider":"The Indian Book Store","version":"1.0","type":"link"}